ಉಳಿತಾಯ ಬಾಂಡುಗಳು
	ಸರ್ಕಾರ ನೀಡುವ ಸಾಲಪತ್ರಗಳಲ್ಲಿ ಒಂದು ಬಗೆ (ಸೇವಿಂಗ್ಸ್ ಬಾಂಡ್ಸ್). ಉಳಿತಾಯವನ್ನು ಪ್ರೇರೇಪಿಸುವುದು ಈ ನೀಡಿಕೆಗಳ ಮುಖ್ಯೋದ್ದೇಶ. ಭಾರತದಲ್ಲಿ ಎರಡನೆಯ ಮಹಾಯುದ್ಧ ಕಾಲದಲ್ಲಿ ರಕ್ಷಣಾ ಉಳಿತಾಯ ಬ್ಯಾಂಕುಗಳನ್ನು ಸ್ಥಾಪಿಸಿ ರಕ್ಷಣಾ ಬಾಂಡುಗಳನ್ನು ಮಾರಾಟ ಮಾಡಲಾಗುತ್ತಿತ್ತು. ಯುದ್ಧ ಮುಗಿದ ಒಂದು ವರ್ಷದ ಅನಂತರ ಇವುಗಳ ಹಣ ಹಿಂತಿರುಗಿಸಬೇಕೆಂದು ಆಗಿನ ಯೋಜನೆ. ಯುದ್ಧಾನಂತರದಲ್ಲಿ ಇವುಗಳ ಮಾರಾಟವನ್ನು ರದ್ದು ಮಾಡಲಾಯಿತು.

	1963ರಲ್ಲಿ ಅಂಚೆ ಕಚೇರಿ ಉಳಿತಾಯ ಬ್ಯಾಂಕುಗಳು ಮಾರಾಟ ಮಾಡುತ್ತಿದ್ದ ಬಹುಮಾನ ಬಾಂಡುಗಳು ಇನ್ನೊಂದು ಉದಾಹರಣೆ. ಈ ವ್ಯವಸ್ಥೆಯನ್ನು ಅದೇ ವರ್ಷದ ಕೊನೆಯಲ್ಲಿ ರದ್ದುಗೊಳಿಸಲಾಯಿತು.				   
(ಎ.ಸಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ